Ambatedka

Dakshina Kannada, Sullia

08257 233208

Support

Farewell Day Celebrated on 27.05.2022

ಕೆ.ವಿ.ಜಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ದ 2017-18 ರ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದ ಹಿನ್ನಲೆಯಲ್ಲಿ ಅವರಿಗೆ ಬಿಳ್ಕೊಡುಗೆ ಸಮಾರಂಭ ದಿನಾಂಕ 27.05.2022 ರಂದು ಕಾಲೇಜು ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಲೀಲಾಧರ ಡಿ.ವಿ. ಸ್ವಾಗತಿಸಿದರು. ಅವರು ವಿದ್ಯಾರ್ಥಿಗಳಿಗೆ ಮುಂದಿರುವ ದಿನಗಳಲ್ಲಿ ಅಪ್ರತಿಮ ವೈದ್ಯಕೀಯ ಜೀವನ ನಿಮ್ಮದಾಗಲಿ ಎಂದು ಹಾರೈಸಿದರು. ಅವರು ಸಾಂಧರ್ಭಿಕವಾಗಿ ಮಾತಾಡುತ್ತಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಜನಾನುರಾಗಿ ಜನಪ್ರಿಯ ವೈದ್ಯರಾಗಿ ಎಂದು ಕಿವಿಮಾತು ಹೇಳಿದರು. ಮುಂದಿರುವ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿ, ಈಗ ಕಲಿತ ವಿದ್ಯೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಎಂದು ಹೇಳಿದರು. ನೆನಪಿನ ಪಾರಿತೋಷಕ ನೀಡಿದರು. SDM ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ದ ಉಪನ್ಯಾಸಕರಾದ ಡಾ.ಗೋವಿಂದ ಶರ್ಮ ಅವರು ಅತಿಥಿಗಳಾಗಿ ಆಗಮಿಸಿದ್ದರು. ಅವರು ವಿಧ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮಹತ್ವ ವಿವರಿಸುತ್ತಾ ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಪಾತ್ರವನ್ನು  ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸರಕಾರಗಳು ಆಯುರ್ವೇದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಬಗ್ಗೆ ಹಾಗೂ ಅದರ ಲಾಭ ಪಡೆಯಲು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ದ ಶ್ರೀ ಜಗದೀಶ್ ಎ.ಎಚ್. ವಹಿಸಿದ್ದರು. ಅವರು ಅಧ್ಯಕ್ಷೀಯ ಭಾಷಣದಲ್ಲಿ ನೀವುಗಳು ಅತ್ಯುತ್ತಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಇನ್ನು ಉನ್ನತ ಶಿಕ್ಷಣ ಪಡೆಯುವ ಮೂಲಕ ಇನ್ನೂ ಹೆಚ್ಚಿನ ಸೇವೆ ನೀಡಲು ಟೊಂಕಕಟ್ಟಿ ನಿಲ್ಲಬೇಕು ಎಂದು ಹೇಳಿದರು.

ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ದ ಡೀನ್ ಪ್ರೊ. ನೀಲಾಂಬಿಕೈ ನಟರಾಜನ್ ಅವರು ಮಾತಾಡುತ್ತಾ ಉತ್ತಮ ವೈದ್ಯರಾಗಿ ಸುಖೀ ಸಖ್ಹೀ ವೈದ್ಯರಾಗಿ ಜನಮನ್ನಣೆ ಗಳಿಸಿರಿ ಎಂದು ಆಶೀರ್ವಾದ ನೀಡಿದರು. ವೇದಿಕೆಯಲ್ಲಿ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ದ ಉಪಪ್ರಾಂಶುಪಾಲ ಡಾ.ಅಶೋಕ ಕೆ., ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಆಸ್ಪತ್ರೆಯ ಡೆಪ್ಯೂಟಿ ಮೆಡಿಕಲ್ ಸುಪರಿನ್ ಟೆಂಡೆನ್ಟ್ ಡಾ.ಕೇಶವ ಪಿ.ಕೆ. ಹಾಗೂ ಶ್ರೀ ಚಂದ್ರ ಶೇಖರ ಪೇರಾಲು  ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು. ಡಾ.ಹರ್ಶಿತಾ ಪುರುಷೋತ್ತಮ ವಂದಿಸಿದರು. ಕಾರ್ಯಕ್ರಮ ನಿರೂಪಣೆ ಕೆಲಸವನ್ನು ಕು. ನೇಹ ಹಾಗೂ ಕು. ಪ್ರತೀಕ್ಷಾ  ನಿರ್ವಹಿಸಿದರು. ಕು. ಶರಧಿ ಹಾಗೂ ಕು. ಸ್ಮಿತಾ ಪ್ರಾರ್ಥನೆಯ ಮೂಲಕ ದೇವರ ಸ್ತುಥಿಸಿದರು. ಸಂಜೆ ವಿದ್ಯಾರ್ಥಿಗಳು ವಿವಿದ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.